Monday, October 12, 2026

ಶ್ರೀಕೃಷ್ಣದೇವರಾಯನಾಗಿ ಸುದೀಪ್ ಅಭಿನಯಿಸುತ್ತಿರುವ ಬಿಗ್ ಬಜೆಟ್ ಚಿತ್ರ ಘೋಷಣೆ

by September 4, 2026

‘ದೇವರಾಯ’ನಾಗಿ ಬೆಳ್ಳಿತೆರೆಗೆ ಕಿಚ್ಚ ಸುದೀಪ್: ವಿಜಯನಗರದ ಸಾಮ್ರಾಟ ಶ್ರೀಕೃಷ್ಣದೇವರಾಯನಾಗಿ ಅಭಿನಯಿಸುತ್ತಿರುವ ಬಿಗ್ ಬಜೆಟ್ ಚಿತ್ರ ಘೋಷಣೆ

ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಭರ್ಜರಿ ಉಡುಗೊರೆಯೊಂದು ಸಿಕ್ಕಿದೆ. ಪೀಪಲ್ ಮೀಡಿಯಾ ಫ್ಯಾಕ್ಟರಿ ನಿರ್ಮಾಣದಲ್ಲಿ, ಪ್ರಿಯಾ ಸುದೀಪ್ ಪ್ರಸ್ತುತಪಡಿಸುತ್ತಿರುವ ಬಹುನಿರೀಕ್ಷಿತ ಪಿರಿಯಾಡಿಕಲ್ ಚಿತ್ರ ‘ದೇವರಾಯ’ ಅಧಿಕೃತವಾಗಿ ಘೋಷಣೆಯಾಗಿದ್ದು, ಇದರಲ್ಲಿ ಸುದೀಪ್ ಅವರು ವಿಜಯನಗರದ ಅರಸ ಶ್ರೀಕೃಷ್ಣದೇವರಾಯನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಐತಿಹಾಸಿಕ ಬೃಹತ್ ಚಿತ್ರವು 2027ರ ಡಿಸೆಂಬರ್‌ನಲ್ಲಿ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ.

ಐತಿಹಾಸಿಕ ಪಾತ್ರಕ್ಕೆ ಸುದೀಪ್ ಎಂಟ್ರಿ ಐತಿಹಾಸಿಕ ಪಾತ್ರಗಳಲ್ಲಿ ನಟಿಸುವ ಬಗ್ಗೆ ತಾವು ಈ ಹಿಂದೆ ಹೊಂದಿದ್ದ ಹಿಂಜರಿಕೆಯನ್ನು ಕಿಚ್ಚ ಸುದೀಪ್ ಬಿಚ್ಚಿಟ್ಟಿದ್ದರು. ದೊಡ್ಡ ಬಜೆಟ್ ಅಥವಾ ಚಿತ್ರದ ಕ್ಯಾನ್ವಾಸ್ ಬಗ್ಗೆ ಅವರಿಗೆ ಯಾವುದೇ ಭಯವಿರಲಿಲ್ಲ, ಆದರೆ ನೈಜ ಐತಿಹಾಸಿಕ ವ್ಯಕ್ತಿಯೊಬ್ಬರನ್ನು ತೆರೆಯ ಮೇಲೆ ತರುವಾಗ ಇತಿಹಾಸದ ಸತ್ಯಾಂಶಗಳಿಗೆ ಚ್ಯುತಿ ಬಾರದಂತೆ ಎಚ್ಚರವಹಿಸಬೇಕಾದ ದೊಡ್ಡ ಜವಾಬ್ದಾರಿ ಇರುತ್ತದೆ ಎಂಬುದು ಅವರ ಕಳವಳವಾಗಿತ್ತು. ಇದೀಗ ಆ ಎಲ್ಲಾ ಸವಾಲುಗಳನ್ನು ಸ್ವೀಕರಿಸಿ, ‘ದೇವರಾಯ’ನಾಗಿ ದಿಟ್ಟ ಹೆಜ್ಜೆ ಇಟ್ಟಿದ್ದಾರೆ.

ಟೈಟಲ್ ಟೀಸರ್‌ನಲ್ಲಿ ರಾಜಗಾಂಭೀರ್ಯದ ದರ್ಶನ ಚಿತ್ರತಂಡ ಬಿಡುಗಡೆ ಮಾಡಿರುವ ಟೈಟಲ್ ಅನೌನ್ಸ್‌ಮೆಂಟ್ ವಿಡಿಯೋದಲ್ಲಿ ವಿಜಯನಗರದ ಸಾಮ್ರಾಟನಾಗಿ ಸುದೀಪ್ ಅವರ ಮೊದಲ ನೋಟವನ್ನು ಪರಿಚಯಿಸಲಾಗಿದೆ. ವಿಡಿಯೋದಲ್ಲಿ ಯಾವುದೇ ಆಕ್ಷನ್ ದೃಶ್ಯಗಳಾಗಲಿ ಅಥವಾ ಡೈಲಾಗ್‌ಗಳಾಗಲಿ ಇಲ್ಲದಿದ್ದರೂ, ಸುದೀಪ್ ಅವರ ಕಣ್ಸನ್ನೆ, ರಾಜಗಾಂಭೀರ್ಯದ ಭಂಗಿ, ತಲೆಯ ಮೇಲಿನ ಕಿರೀಟ ಮತ್ತು ಮುತ್ತಿನ ಆಭರಣಗಳ ಮೂಲಕ ಅವರ ಪಾತ್ರದ ತೂಕವನ್ನು ಅದ್ಭುತವಾಗಿ ಕಟ್ಟಿಕೊಡಲಾಗಿದೆ.

ಬೃಹತ್ ತಾಂತ್ರಿಕ ಬಳಗ ಈ ಚಿತ್ರವನ್ನು ಪೀಪಲ್ ಮೀಡಿಯಾ ಫ್ಯಾಕ್ಟರಿ (PMF) ಅಡಿಯಲ್ಲಿ ಟಿ.ಜಿ. ವಿಶ್ವ ಪ್ರಸಾದ್ ಮತ್ತು ಕೃತಿ ಪ್ರಸಾದ್ ನಿರ್ಮಿಸುತ್ತಿದ್ದು, ಸುಪ್ರಿಯನ್ವಿ ಪಿಕ್ಚರ್ ಸ್ಟುಡಿಯೋಸ್ ಮೂಲಕ ಪ್ರಿಯಾ ಸುದೀಪ್ ಪ್ರಸ್ತುತಪಡಿಸುತ್ತಿದ್ದಾರೆ. ಸುಜಿತ್ ಕೊಲ್ಲಿ ಅವರು ಮುಖ್ಯ ಕಾರ್ಯನಿರ್ವಾಹಕ ನಿರ್ಮಾಪಕರಾಗಿದ್ದರೆ, ಗೌರ ಹರಿ ಕೆ. ಅವರ ಸಂಗೀತ ಸಂಯೋಜನೆ ಹಾಗೂ ಪಿಎಂಎಫ್ ವಿಎಫ್‌ಎಕ್ಸ್ (PMF VFX) ತಂಡದ ದೃಶ್ಯಗೋಚರ ತಂತ್ರಜ್ಞಾನ (Visual effects) ಚಿತ್ರದ ಬೃಹತ್ ಕ್ಯಾನ್ವಾಸ್‌ಗೆ ಸಾಥ್ ನೀಡಲಿವೆ.

Leave a Reply

Your email address will not be published.

ಇನ್ನಷ್ಟು…

Archives

Search by Date

October 2026
M T W T F S S
 1234
567891011
12131415161718
19202122232425
262728293031  

Latest from Blog